ಆಗು ನೀ ದೇಶದ ಮಹಾನ್ ಚೇತನ
ಎಬ್ಬಿಸಿ ನಿಮ್ಮ ಆತ್ಮಬಲವನ್ನ
ಹಾಕಿಕೊಳ್ಳಿ ಮಹೋನ್ನತವಾದ ಗುರಿಯನ್ನ
ಇಡಿ ನಿಮ್ಮ ದೃಷ್ಟಿಯನು ಹೆಜ್ಜೆಯಿರಿಸುವ ಮುನ್ನ ;
ಸಾಕಾರಗೊಳಿಸಿ ,ನಮ್ಮ ವೀರರ ಕನಸನ್ನ //
ಸಿಲುಕಿಹಳು ನಮ್ಮಮ್ಮ ದೇಶದ್ರೋಹಿಗಳ ಬಂಧನದೊಳಗೆ ;
ಕರೆಯುತಿಹಳು ತನ್ನ ಮಕ್ಕಳನು
ಬಿಡಿಸು ,ನನ್ನನೊಮ್ಮೆ //
ಕರೆಯುತಿಹಳು ತನ್ನ ಮಕ್ಕಳನು
ಬಿಡಿಸು ,ನನ್ನನೊಮ್ಮೆ //
ತಾಯಿಯ ಬಿಡುಗಡೆಗೆ ಬೇಕು ;
ಹಣವಲ್ಲ , ನಿನ್ನ ಅಮೂಲ್ಯ ಸಮಯ !
ಬಿಡು ನಿನ್ನ ಸ್ವಾರ್ಥವನು , ಇಡು ಮುಂದೆ
ಹಣವಲ್ಲ , ನಿನ್ನ ಅಮೂಲ್ಯ ಸಮಯ !
ಬಿಡು ನಿನ್ನ ಸ್ವಾರ್ಥವನು , ಇಡು ಮುಂದೆ
ಹೆಜ್ಜೆಯನು ;
ಹೋಗಲಾಡಿಸಲು ಬಾ.... ದೇಶದ ಕತ್ತಲನು //
ಹೋಗಲಾಡಿಸಲು ಬಾ.... ದೇಶದ ಕತ್ತಲನು //
ಸಾಕು ನಿಲ್ಲಿಸು ; ಈ ಭೋಗ ಜೀವನ
ಉದಯಿಸಲಿ ಹೃದಯದೊಳಗೆ ಸ್ಪೂರ್ತಿಯ ಪ್ರಜ್ವಲನ
" ಆಗು ನೀ ದೇಶದ ಮಹಾನ್ ಚೇತನ"