Saturday 15 August 2020

ಶ್ರೀರಾಮ ಮಂದಿರ ಕನಸು ❤️🚩

ಕಾತರಸಿ ಕಾಯುತಿದೆ ಕೋಟಿ ಕಣ್ಣುಗಳು

ಭವ್ಯ ಮಂದಿರದೊಳು ನಿನ್ನನು ಕಾಣಲು

ಫಲ-ಪುಷ್ಪ ಪೂಜಾರತಿಗಳು ಕಾದಿರೆ

ನಿನಗೆಂದೇ ಅರ್ಪಿಸಲು...

ಮನೆಮನೆಯಲೂ ಹಾರಲಿ ಕೇಸರಿ ದ್ವಜ 🚩

ಎಲ್ಲೆಡೆಯೂ ಮೊಳಗಲಿ ರಾಮನಾಮ ಜಯಘೋಷ

ಧರ್ಮ ಪುನಃಸ್ಥಾಪನೆಗೆ ನಾಂದಿಯಾಗಲಿರುವ ಈ ವರ್ಷ

ಹೊತ್ತು ತರಲಿದೆ ಭರತವರ್ಷಕ್ಕೆ ಹರುಷ 😃


✍️ ನೇತ್ರಾವತಿ ತೀರದಿಂದ.



#ಮಂದಿರವಲ್ಲೇ ಕಟ್ಟುವೆವು 😍🚩

#ಜೈ ಶ್ರೀ ರಾಮ್ 🙏🚩

#ಆಗಸ್ಟ್ 5 ,2020 ರಾಮ ಮಂದಿರ ಭೂಮಿ ಪೂಜಾ ❤️

#ಜೈ ಭವಾನಿ🚩

#ಶ್ರೀರಾಮ ಜಯ ರಾಮ ಜಯ ಜಯ ರಾಮ 😍🚩🙏💐


✍️ತೋಚಿದ್ದು.... ಗೀಚಿದ್ದು -8







 

ಕಳೆಯಿತು ಇಂದು ಒಂದು ವರುಷ ನಿನ್ನ ನೆನಪಿನಲ್ಲೇ.

ಕಳೆಯಿತು ಇಂದು ಒಂದು ವರುಷ ನಿನ್ನ ನೆನಪಿನಲ್ಲೇ. ಕಾರಣ ಕಣ್ಣ ಮುಂದೆ ನಡೆದು ಹೋಗುವ ಕೆಲವೊಂದು ಘಟನೆಗಳು ಅಚ್ಚಳಿಯದೆ ಉಳಿಯುವವು. ದೋಣಿಯ ಮೂಲಕ ಜೀವನ ಬಂಡಿಯನು ನಡೆಸುತ್ತಿದ್ದ ನಮ್ಮೂರಿಗೆ 2013ರಲ್ಲಿ ಪರಿಚಯವಾದ ಸ್ನೇಹಿತ ನೀನು.

ಬಹಳ ವರ್ಷಗಳ ಬಳಿಕ ಬದುಕಿನ ಒಡನಾಡಿಯಾಗಿ ಊರಿಗೆ ಬಂದ ನಿನ್ನನ್ನು ; ಕೆಲವು ಮನಸುಗಳ ಬಡಿದಾಟದಿಂದ ಸರಿಯಾಗಿ ಬರಮಾಡಿಕೊಳ್ಳಲು ಆಗಲೇ ಇಲ್ಲ. ಆದರೂ ನೀನು ಏಳು ವರ್ಷಗಳ ಕಾಲ ನಮ್ಮ ಬದುಕಿನ ಏಳುಬೀಳುಗಳಲ್ಲಿ ಒಡನಾಡಿಯಾಗಿ, ಪೆನ್ನು ಹಿಡಿದು ಕುಳಿತವಗೆ ಬರಹಗಳಿಗೆ ಸ್ಫೂರ್ತಿಯಾಗಿ, ವಿದ್ಯಾರ್ಥಿಗಳಿಗೆ ತಮ್ಮ ಕನಸಿನ ಆಗಸವನೇರಲಿರೋ ಮೆಟ್ಟಿಲಾಗಿ, ಪ್ರವಾಸಿಗರನು ಊರಿಗೆ ಕೈ ಬೀಸಿ ಕರೆದು ಅವರ ಪ್ರಯಾಸವನಿಳಿಸೋ ಮಿತ್ರನಾಗಿ, ಊರಿಗೆ ಸಂಪರ್ಕ ಸೇತುವೆಯಾಗಿ ಜೀವನಾಧಾರದ ವ್ಯವಸ್ಥೆಯಾದೆ. 

ಇಂದು ಮತ್ತದೇ ದಿನ ಮರಳಿ ಬಂದಿದೆ, ನಿನ್ನೊಂದಿಗೆ ಕಳೆದಿಹ ಮರೆಯಲಾಗದ ನೆನಪುಗಳು ಮರುಕಳಿಸುತ್ತಿವೆ. ಆ ದಿನವೇ ಆಗಸ್ಟ್ 09/08/2019 ಅಂದರೆ ಇಂದು. ಆಶ್ಲೇಷ ಮಹಾನಕ್ಷತ್ರ ಸಮಯದಲ್ಲಿ ಸುರಿದ ಭಾರೀ ಮಳೆಗೆ ಮನಸಿನಿಂದ ಮಾಸಲಾಗದಂತಹ ಘಟನೆ ನಡೆದು ಹೋಗಿ ಜೀವನಾಧಾರವಾಗಿದ್ದ ತೂಗುಸೇತುವೆಯ ಕೊಂಡಿಯು ಕಳಚಿಕೊಂಡಿತ್ತು . 

ಕೆಲವೊಂದು ಬಾರಿ ವಾಸ್ತವವಾಗಿ ಪರ್ಜನ್ಯ ನ ಕೋಪಕ್ಕೆ ತುತ್ತಾಗಿ ತೂಗುಸೇತುವೆಯನ್ನು ಕಳೆದುಕೊಂಡೆವು ಎನ್ನುವುದಕ್ಕಿಂತ ನಾವು ಮಾಡಿದ ಕೆಲಸದಿಂದಾಗಿ ಕಳೆದುಕೊಂಡಿದ್ದೇವೆ ಎಂದೆನಿಸುತ್ತದೆ(ಕಳೆದುಕೊಳ್ಳುತ್ತೇವೆ ಕೂಡ).

ಅದೇನೇ ಇರಲಿ ತುಂಬಿ ಹರಿವ ನೇತ್ರಾವತಿಯ ತೀರದಿ ಬದುಕನ್ನು ಕಟ್ಟಿಕೊಂಡಿರುವ ನಮ್ಮ ಊರಿಗೆ ನಿನ್ನೆ ಬಂದ 'ಸುದ್ದಿ'ಯಲ್ಲಿ ಮನಸದು ಹರುಷದಿ ತುಂಬಿದೆ. ಅದಕ್ಕೆ ಕಾರಣವೂ ನೀನೆ ಏಕೆಂದರೆ ನೀನು ಮತ್ತೆ ಮರಳಿ ಬರುತ್ತಿದ್ದೀಯ ❤️😍.

ವಿಷಾದವಿದೆ ಇಂದು ನಿನ್ನ ಕಳೆದು ಕೊಂಡ ದಿನವು ಹೌದು👍ಮತ್ತೆ ಜೀವನದಿ ಒಡನಾಡಿಯಾಗಿ ಹುಟ್ಟಿ ಬರುವೆ ಎಂದು ಸಿಹಿಸುದ್ದಿ ಕೇಳಿದ ದಿನವೂ ಹೌದು 😍.


 ✍️ನೇತ್ರಾವತಿ ತೀರದಿಂದ.


🤩 "ಮತ್ತೆ ನಾನು ಹುಟ್ಟಿ ಬರುವೆ  ಬದುಕಿನಲಿ ಹೊಸ ಭರವಸೆಗಳ ಹೊತ್ತು ತರುವೆ"🤩


✍️ಇಂತೀ ನಿಮ್ಮವನು


-ತೂಗುಸೇತುವೆ 😍