Saturday 29 December 2018

ತೋಚಿದ್ದು....ಗೀಚಿದ್ದು - 4

ತಾಯಿ
ಉಸಿರನಿತ್ತು;ನವ ಮಾಸಗಳ ಕಾಲ ಬಸಿರೊಳು ಬಚ್ಚಿಟ್ಟು, ಮಗುವಿಗೆ ಜನ್ಮವನಿತ್ತು ;
ತಾನು ಪುನರ್ಜನ್ಮ ಪಡೆವ ಮಹಾಮಯಿ "ತಾಯಿ".
✍ನೇತ್ರಾವತಿ ತೀರದಿಂದ.


ಬೆಂಗಳೂರು
ಎತ್ತ ನೋಡಿದರತ್ತ.. ಚಿತ್ತ ಹಾಯಿಸಿದತ್ತ... ಕಸದ ರಾಶಿಯ ಮೊತ್ತ...ಹೀಗೆ ಸಾಗುತಲಿದೆ ಬೆಂಗಳೂರು ಅಭಿವೃದ್ಧಿಯತ್ತ.
✍️ನೇತ್ರಾವತಿ ತೀರದಿಂದ.


ರಕ್ಷಾ ಬಂಧನ
ಪುಟ್ಟ ತಂಗಿಯ ಕೈ ಹಿಡಿದು
ಪ್ರತಿ ಸಣ್ಣ ಕನಸುಗಳಿಗೆ ಬಣ್ಣವನು ಹಚ್ಚಿ
ಅವಳ ನೆಚ್ಚಿನ ಆಸೆಗಳನು ಪತ್ತೆ ಹಚ್ಚಿ...
ಕನಸಿನ ಚಪ್ಪರಕೆ ಏಣಿಯಂತೆ ತಾ ನಿಂತು...
ಇಚ್ಛೆಗಳ ಪೂರೈಸುವವ ಅಣ್ಣ❤️
ಬಣ್ಣಿಸಲಾಗದ, ಬಿಡಿಸಲಾಗದ ಅನುಬಂಧ
ಅಣ್ಣ - ತಂಗಿ ಸಂಬಂಧ.
✍️ನೇತ್ರಾವತಿ ತೀರದಿಂದ.

Friday 28 December 2018

ಮಾತು

ಮಾತೆಂಬುದು ಕತ್ತಿಯ ಅಲಗು
ಮಾತು.....
ಇದರಿಂದ ಪರಿಚಯವಾದವರೆಷ್ಟೋ
ಖುಷಿ ಪಟ್ಟವರೆಷ್ಟೋ😊
ನೊಂದವರೆಷ್ಟೋ😕ಈ ಮಾತಿಗೆ
ನಕ್ಕವರೆಷ್ಟೋ😆😂🤣
ಬಾಳಿನಲಿ ತಂದವವು
ಎಣಿಸಲಾರದಷ್ಟು ಘಟನೆಗಳ ಕಟ್ಟು
ಆದರೆ...
ಮಾತೇ ಬೆಳ್ಳಿ ಮೌನ ಬಂಗಾರವೆಂಬುದ ತಿಳಿಯದೇ
ಸಮಸ್ಯೆಗೆ ಸಿಲುಕಿದವರೆಷ್ಟೋ
ಈ ಕಲಿಯುಗದಲಿ ಮಾತು ಬರೀ ವೇಷ್ಟು
ಮೌನವೇ ದಿ ಬೆಸ್ಟ್ 👍ಇದನರಿತುಕೋ ನೀ ಬೇಗ ಆದಷ್ಟು!!!
✍️ನೇತ್ರಾವತಿ ತೀರದಿಂದ 😊

ತೋಚಿದ್ದು.... ಗೀಚಿದ್ದು - 3









ತೋಚಿದ್ದು... ಗೀಚಿದ್ದು - 2
































ತೋಚಿದ್ದು... ಗೀಚಿದ್ದು - 1