Tuesday 22 June 2021

ಪ್ರಕೃತಿಯೇ ಪರಮಾತ್ಮ

 


ಪ್ರಕೃತಿಯೇ ಪರಮಾತ್ಮ


ಪೂರ್ವಿಕರೇ ನುಡಿದ ಮಾತಿದು ಕೇಳು

ಪ್ರಕೃತಿಯಲಿ ಪರಮಾತ್ಮನ ಕಾಣೆಂದು|

ಆದರೆ... ಮನದೊಳು ಸದಾ 

ಸ್ವಾರ್ಥವ ತುಂಬಿಹ ಹೇ...ಮನುಜನೆ ಹೇಳು

ನಿನ್ನಾ ದುರಾಸೆಗೆ ಮಿತಿ ಎಂದು!???


ಪುರದ ಹಿತವನು ಬಯಸದ ನಾಯಕರು

ಪಕ್ಷ ರಾಜಕೀಯ ಮಾಡುತಲಿ।

ಪ್ರಾಣಿ ಪಕ್ಷಿಗಳ ಪ್ರಾಣವ ಹಿಂಡುತ ...

ಪರಿಸರ ಕೆಡಿಸುತ.. ಪಟ್ಟಣ ಕಟ್ಟುತ

ಅಭಿವೃದ್ಧಿಯ ಹಿಂದೆ ತಾ ಓಡೋಡುತಲಿ ||


ಪುಕ್ಕಟೆ ಕಾಸಿನ ಆಸೆಯ ತೋರಿಸಿ 

ಪ್ರಜೆಗಳ ಮನಸನು ಬೇರೆಡೆ ಹರಿಸಿ 

ಹಸಿರನು ಕರಗಿಸಿ... ಭೂಮಿಯ ಕಬಳಿಸಿ

ಸರಿ ತಪ್ಪು ಲೆಕ್ಕಿಸಿ...

ಪರಿಸರ ರಕ್ಷಣೆ ನಾಟಕವನಾಡುತಲಿ ||


ಕಾಲವು ಉರುಳಿತು ... ಕೊರೋನ ಬಂದಿತು

ಕಾಣದ ವೈರಾಣುವು.. ಪಾಪಿ ಮನುಜ ಕುಲವ ನಡುಗಿಸಿತು...

ಮರಣ ಮೃದಂಗವನೆ ಬಾರಿಸಿತು|

ಪ್ರಕೃತಿಯು ಮುನಿದರೆ ಮನುಜನು ಉಳಿವನೆ ?!

ಎಂಬ ನೀತಿಯ ಕಲಿಸುತಲಿ ||


ಅರಸುತಲಿಂದು ಪರಿಹಾರದ ಸೂತ್ರವ

ಪ್ರಾಣ ಪಕ್ಷಿಯ ಉಳಿಸುವ ಸಲುವಿನಲಿ

ಪ್ರಸ್ತುತ ಪರಿಸ್ಥಿತಿಗೆ ಪರಿತಪಿಸಿ ಫಲವಿಲ್ಲ

ಪೂರ್ವಿಕರ ಮಾತದು ಸತ್ಯ ನೆನಪಿರಲಿ ||


ಪರಂಪರೆ ಮರೆಯದೆ .... ಪರಿಸರ ಕೆಡಿಸದೆ

ಪುನಃ ಪೂಜಿಸು ನೀನು ಅವಳನಿಂದು..

ಪೊರೆವಳು ನಮ್ಮನು ಎಂದೆಂದೂ ||



✍️ ನೇತ್ರಾವತಿ ತೀರದಿಂದ

No comments:

Post a Comment