Friday 13 April 2018

ಬಂದಾ ಬಂದಾ ಮಳೆರಾಯ

                            ಬಂದಾ ಬಂದಾ ಮಳೆರಾಯ

ಬಿರು ಬೇಸಿಗೆಯಲ್ಲಿ ಕಾದು ಕೆಂಪಾಗಿ; ಬಾಯಿಯೊಡೆದು ಹಸಿದು ಕುಳಿತಿರುವ ನೆಲಕ್ಕೆ ...' ಟಪ್ '  ಎಂದು  ಆಗಸದಿಂದ ಮಳೆಹನಿಯು ಬಿದ್ದಾಗ ಮಣ್ಣು ಹೊರಸೂಸುವ ಸುವಾಸನೆ !!!
ಅದಾಗ ತಾನೇ ಮುಗಿದಿರುವ ಬೇಸಿಗೆ; ಬೆಂದು ಹೋಗಿರುವ ಪ್ರಕೃತಿಯ ಒಡಲಿನ ಜೀವಗಳಿಗೆ ಪುನರ್ ಜನ್ಮ ನೀಡಲು ಬಂದಿರುವ ಮಳೆರಾಯ. 
                  ಮಳೆಗಾಲ ....! ಬಳಲಿರುವ ಜೀವಕೆ ತಂಪನ್ನೆರೆಯುವುದಲ್ಲದೇ ; ಜೀವದೊಳಗೆ ಹುದುಗಿದ ಭಾವನೆಗಳಿಗೆ,                            ಕವಿತ್ವದ ಮನಸುಗಳಿಗೆ , ಚಿಣ್ಣರಿಗೆ , ಅನ್ನವ ನೀಡೋ ರೈತನಿಗೆ, ಪಶು-ಪಕ್ಷಿಗಳಿಗೆ ....ಅಷ್ಟೇ ಏಕೆ ; ಸಕಲ ಜೀವ                    ಚರಾಚರಗಳಲ್ಲಿ ಜೀವ-ಸಂಚಾರ ಹಾಗೂ ಜೀವಕಳೆ  ಮೂಡಿಸುವುದು ಮಳೆ.
ಇಷ್ಟೆಲ್ಲಾ ಮಾಡೋ ಮಳೆರಾಯ ಮನದಲ್ಲಿರುವ ಭಾವನೆಗಳಿಗೆ ಬಣ್ಣ -ಹಚ್ಚಿ  ಮನಸಿನೊಳದಾಗ ಚಿತ್ತಾರವ ಬಿಡಿಸೋ ಚಿತ್ರಕಾರ ನಮ್ಮ ಮಳೆರಾಯ . ಮನೆಗೆ ಬರುವ ಅತಿಥಿಗೆ ಸತ್ಕರಿಸಲು ನಡೆಸುವ ತಯಾರಿಯಂತೆಯೇ ಥೇಟ್ ! ತಯಾರಿ ನಮ್ಮ ಹಳ್ಳಿಗಳಲ್ಲಿನ ಮನೆಯ ಹಿರಿಯರು ನಡೆಸುವುದು ರೂಢಿ . 
                   ಜೋರಾಗಿ ಮಳೆ ಬರುವಾಗ ಕುರುಮ್ -ಕುರುಮ್ ತಿನ್ನಲು ತಯಾರಿಸೋ ಹಲಸಿನಕಾಯಿ ಹಪ್ಪಳ, ಊಟಕ್ಕೆ ನೆಂಚಿಕೊಳ್ಳಲು ತರ ತರಹದ ಸಂಡಿಗೆ, ಉಪ್ಪಿನ ನೀರಿನಲ್ಲಿ ಅಜ್ಜಿ ಶೇಖರಿಸಿಟ್ಟ ಮಾವಿನಕಾಯಿ ,ಹಲಸಿನ ತೊಳೆ ;    ಗೇರುಬೀಜ ,ಹಲಸಿನ ಬೇಳೆ ಹೀಗೆ  ಇಷ್ಟೇ  ಅಲ್ಲ ಬರೆಯುತ್ತಾ ಹೋದರೆ ಬಹಳಷ್ಟಿವೆ. 

                   ಇದರೊಂದಿಗೆ ಕಾಗದದದೋಣಿಗಳನ್ನು ಮಾಡಿ ನೀರಿನಲ್ಲಿ ಬಿಡುವ ಮಜಾ .... ಕೆಸರುನೀರಿನೊಳಗಿಳಿದು ಆಡುವ ಆಟ, ಮಳೆಯಲ್ಲಿ ನೆನೆದಾಗ ಒಗ್ಗರಣೆಯಂತೆ ಚಟಚಟ ಎಂದು  ಮನೆಯ ಒಳಗಿಂದ ಕೇಳಿಸಿಕೊಳ್ಳುವ ಹಿರಿಯರ ಬೈಗಳುಗಳು  ಅದರ ಗಮ್ಮತ್ತೇ ಬೇರೆ....!!
ಹೇಳುತ್ತಾ ಹೋದರೆ ಮುಗಿಯದಷ್ಟು ನೆನಪುಗಳನ್ನು,ಸಂತೋಷದ ಸವಿಕ್ಷಣಗಳನ್ನು ಹೊತ್ತುತರುವ ಗೆಳೆಯ ಮಳೆರಾಯ ....!


                                                                                                                     - ವಿಧಾತ್ರೀ ಪಿ ಎಸ್ 




ನಾನಿಷ್ಟ ಪಟ್ಟ Whats app Dare


                 ನಾನಿಷ್ಟ ಪಟ್ಟ Whats app Dare


Whats app Dare:
ದಿನ ಬೆಳಗಾದ್ರೆ ಸಾಕು,whats app open ಮಾಡಿದಾಗ ಒಂದಿಷ್ಟು msgs, ಅವುಗಳಲ್ಲಿ ಒಂದಿಷ್ಟು ಉಪಯೋಗಕ್ಕೆ ಬರದಿರೋ ಕಾಂಚಿ-ಪಿಂಚಿ
dare ಗಳು😏ಅವೂ ಹೆಂಗೆಲ್ಲ ಅಂದ್ರೆ ನಾವು ಇರೋ ಸಂಖ್ಯೆಗಳಲ್ಲಿ,emoji ಗಳಲ್ಲಿ  ಒಂದಂನ್ನ ಆರಿಸ್ಬೇಕು,ಅದ್ಕೆ ಹೊಂದಿಕೆಯಾಗಿ ನನ್ನ ಬಗ್ಗೆ ನಿಮ್ಮ whats app ನಲ್ಲಿ ಹೀಗೆ ಹಾಕಿ,ಹಾಗೆ ಹಾಕಿ ಅಂತ....ಇದನ್ನು ದಿನಾ ನೋಡಿ ನೋಡಿ ಸಾಕಾಗಿತ್ತು....ಏನೇನಕ್ಕೂ ಉಪಯೋಗಕ್ಕಿಲ್ಲದ ಪೊಟ್ಟು,ಅರ್ಥಹೀನ dareಗಳು😒ಒಂದಿಷ್ಟೂ ಹುರುಳಿಲ್ಲದ dareಗಳವು..
 ಸ್ವಲ್ಪ ಸಮಯ ಹಿಂದೆ ಒಂದು dare ಸಿಕ್ಕಿತ್ತು..ಧರ್ಮಜಾಗೃತಿ ಮತ್ತು ನಿತ್ಯಣ್ಣನಿಂದ.ಏನಪ್ಪಾ ಆ dare ಅಂದ್ರೆ ನಾವು ಓದಿ ಇಷ್ಟಪಟ್ಟ, ಒಳ್ಳೇ ಪುಸ್ತಕಗಳ ಫೋಟೋ ಹಾಕುವುದು ಮತ್ತು ಅದರ ಬಗ್ಗೆ ಸಾಧ್ಯವಾದರೆ ಒಂದೆರಡು ಸಾಲನ್ನು ಬರೆಯುವುದು..
ಈಗ ನಿನ್ನೆಯೊಂದು ಹೀಗೆಯೇ ಇರುವ ಒಳ್ಳೆಯ dare ಸಿಕ್ಕಿತು...ಅದೂ ಧರ್ಮಜಾಗೃತಿ ಮತ್ತು ನಿತ್ಯಣ್ಣ ನಿಂದ
 ಏನಪ್ಪಾ ಆ dare ಅಂದ್ರೆ ನಮ್ಮ ಜೀವನಕ್ಕೆ ಆದರ್ಶರಾದವರ ಫೋಟೋ ಹಾಕಿ, ಅವರ ಬಗ್ಗೆ ಒಂದೆರಡು ಸಾಲುಗಳನ್ನು ಬರೆಯುವುದು..
 ನಿತ್ಯಣ್ಣ ಕೊಟ್ಟ dare... ನಮಗೆ ಆದರ್ಶರಾದವರ ಫೋಟೋವನ್ನು status ಆಗಿ ಹಾಕುವುದು ಮತ್ತೆ ಸಾಧ್ಯವಾದರೆ ಅವರ ಬಗ್ಗೆ ಒಂದೆರಡು ಸಾಲನ್ನು ಬರೆಯುವುದು.ನಿತ್ಯಣ್ಣ  ಕೊಟ್ಟ ಆ dare ನೋಡಿ ತುಂಬಾ ಖುಷಿ ಮತ್ತು ಇಷ್ಟನೂ ಆಯ್ತು !!!!!
ಹಾಗೇ  ನನ್ನ  ಮನಸಿನ ಭಾವನೆಗಳನ್ನು ಪದಗಳಿಗೆ ಇಳಿಸಿದೆ.










































                                                                                          -ವಿಧಾತ್ರೀ .ಪಿ.ಎಸ್