ನಾನಿಷ್ಟ ಪಟ್ಟ Whats app Dare
Whats app Dare:
ದಿನ ಬೆಳಗಾದ್ರೆ ಸಾಕು,whats app open ಮಾಡಿದಾಗ ಒಂದಿಷ್ಟು msgs, ಅವುಗಳಲ್ಲಿ ಒಂದಿಷ್ಟು ಉಪಯೋಗಕ್ಕೆ ಬರದಿರೋ ಕಾಂಚಿ-ಪಿಂಚಿ
dare ಗಳು😏ಅವೂ ಹೆಂಗೆಲ್ಲ ಅಂದ್ರೆ ನಾವು ಇರೋ ಸಂಖ್ಯೆಗಳಲ್ಲಿ,emoji ಗಳಲ್ಲಿ ಒಂದಂನ್ನ ಆರಿಸ್ಬೇಕು,ಅದ್ಕೆ ಹೊಂದಿಕೆಯಾಗಿ ನನ್ನ ಬಗ್ಗೆ ನಿಮ್ಮ whats app ನಲ್ಲಿ ಹೀಗೆ ಹಾಕಿ,ಹಾಗೆ ಹಾಕಿ ಅಂತ....ಇದನ್ನು ದಿನಾ ನೋಡಿ ನೋಡಿ ಸಾಕಾಗಿತ್ತು....ಏನೇನಕ್ಕೂ ಉಪಯೋಗಕ್ಕಿಲ್ಲದ ಪೊಟ್ಟು,ಅರ್ಥಹೀನ dareಗಳು😒ಒಂದಿಷ್ಟೂ ಹುರುಳಿಲ್ಲದ dareಗಳವು..
ಸ್ವಲ್ಪ ಸಮಯ ಹಿಂದೆ ಒಂದು dare ಸಿಕ್ಕಿತ್ತು..ಧರ್ಮಜಾಗೃತಿ ಮತ್ತು ನಿತ್ಯಣ್ಣನಿಂದ.ಏನಪ್ಪಾ ಆ dare ಅಂದ್ರೆ ನಾವು ಓದಿ ಇಷ್ಟಪಟ್ಟ, ಒಳ್ಳೇ ಪುಸ್ತಕಗಳ ಫೋಟೋ ಹಾಕುವುದು ಮತ್ತು ಅದರ ಬಗ್ಗೆ ಸಾಧ್ಯವಾದರೆ ಒಂದೆರಡು ಸಾಲನ್ನು ಬರೆಯುವುದು..
ಈಗ ನಿನ್ನೆಯೊಂದು ಹೀಗೆಯೇ ಇರುವ ಒಳ್ಳೆಯ dare ಸಿಕ್ಕಿತು...ಅದೂ ಧರ್ಮಜಾಗೃತಿ ಮತ್ತು ನಿತ್ಯಣ್ಣ ನಿಂದ
ಏನಪ್ಪಾ ಆ dare ಅಂದ್ರೆ ನಮ್ಮ ಜೀವನಕ್ಕೆ ಆದರ್ಶರಾದವರ ಫೋಟೋ ಹಾಕಿ, ಅವರ ಬಗ್ಗೆ ಒಂದೆರಡು ಸಾಲುಗಳನ್ನು ಬರೆಯುವುದು..
ನಿತ್ಯಣ್ಣ ಕೊಟ್ಟ dare... ನಮಗೆ ಆದರ್ಶರಾದವರ ಫೋಟೋವನ್ನು status ಆಗಿ ಹಾಕುವುದು ಮತ್ತೆ ಸಾಧ್ಯವಾದರೆ ಅವರ ಬಗ್ಗೆ ಒಂದೆರಡು ಸಾಲನ್ನು ಬರೆಯುವುದು.ನಿತ್ಯಣ್ಣ ಕೊಟ್ಟ ಆ dare ನೋಡಿ ತುಂಬಾ ಖುಷಿ ಮತ್ತು ಇಷ್ಟನೂ ಆಯ್ತು !!!!!
ಹಾಗೇ ನನ್ನ ಮನಸಿನ ಭಾವನೆಗಳನ್ನು ಪದಗಳಿಗೆ ಇಳಿಸಿದೆ.
![](https://blogger.googleusercontent.com/img/b/R29vZ2xl/AVvXsEidCdyPgSSO4IpYLwbjyNQ_rXlXhRjztCeCtgJ7O36Dl343pu0_CFVeieGFxfvlong99WEVO7JqyliaHbt6NE4MvyPKeqHwHh75ZyYIXf3c3es3W-waGZqa9AU02IKKryuPbVzpUZd0UkBV/s640/_20180408_151939.jpg)
-ವಿಧಾತ್ರೀ .ಪಿ.ಎಸ್
No comments:
Post a Comment