ಶ್ರೀ ರಾಮಕುಂಜೇಶ್ವರ ಕಾಲೇಜು
ಬೆಳಗುತಿದೆ ಬೆಳಗುತಿದೆ ವಿದ್ಯಾ ಮಂದಿರ
ರಾಮಕುಂಜ ನಾಮಾಂಕಿತ ವಿದ್ಯಾ ಮಂದಿರ //
ಹತ್ತೂರಿಗೆ ಚಿರಪರಿಚಿತ ಈ ಮಂದಿರ .
ಶಿಸ್ತು, ನಡೆ , ಸಂಯಮಕೆ ಹೆಸರಾಗಿರೋ ವಿದ್ಯಾ ಮಂದಿರ //
ಪೇಜಾವರರ ಕನಸಿನ ಕೂಸು ಈ ಮಂದಿರ .
ಅಂಬೆಗಾಲಿಕ್ಕುತ ಅಭಿವೃದ್ಧಿಯತ್ತ ಸಾಗುತಿದೆ ಈ ಮಂದಿರ //
ಶ್ರೀ ರಾಮಕುಂಜೇಶ್ವರನು ಇಲ್ಲಿ ಅಧಿದೇವತೆ
ಜೊತೆಗೆ ನೆಲೆಸಿಹಳಿಲ್ಲಿ ತಾಯಿ ಜ್ಞಾನ ದೇವತೆ //
ಗ್ರಾಮೀಣ ಪ್ರತಿಭೆಗಳಿಗೆ ಇಲ್ಲಿ ನೀಡೋ ಬೆಲೆ
ಅವರಿಗದು ಕಲ್ಪಿಸುವುದು ಸಮಾಜದಲಿ ನೆಲೆ //
ಎಲ್ಲರನು ಪರಿಗಣಿಸುವರು ಇಲ್ಲಿ
ಈ ಗುಣಕೆ ಸರಿ ಸಾಟಿ ಎಲ್ಲಿ //
ವಿದ್ಯಾರ್ಥಿಗಳಿಗಿದೆ ಇಲ್ಲಿ ಅವಕಾಶ
ವಿದ್ಯಾರ್ಜನೆಗೆ ಇದುವೇ ಸದಾವಕಾಶ
ಬಳಸಿಕೊಳ್ಳಿ ಈ ಸುವರ್ಣಾವಕಾಶ //
-ವಿಧಾತ್ರೀ .ಪಿ.ಎಸ್
No comments:
Post a Comment